ಬೇಲೂರು ಪಟ್ಟಣದ ಡಾ.ಶ್ರೀ ಶ್ರೀ ಶಿವಕುಮಾರಸ್ಚಾಮೀಜಿ ಟ್ರಸ್ಟ್ ವತಿಯಿಂದ ಇದೇ ಜನವರಿ 30 ರ ಗುರುವಾರ ಬೆಳಿಗ್ಗೆ 10 ಗಂಟಗೆ ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀ ಶಿವಕುಮಾರಮಹಾಸ್ವಾಮೀಜಿ ಕಲ್ಯಾಣ ಮಂಟಪಕ್ಕೆ ಪರಮಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಆಗಮಿಸಲಿದ್ದು, ಶ್ರೀ ಪಾದಪೂಜೆ ಮತ್ತು ಧಾರ್ಮಿಕ ಸಭೆಯನ್ನು ನಡೆಸಲಾಗುತ್ತದೆ ಸರ್ವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಮೂಲಕ ಶ್ರೀಗಳ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ಶಿವಕುಮಾರಸ್ಚಾಮೀಜಿ ಟ್ರಸ್ಟ್ ನಿರ್ದೇಶಕ ಅದ್ದೂರಿ ಚೇತನಕುಮಾರ್ ಹೇಳಿದರು.
ಬೇಲೂರು ಪಟ್ಟಣದ ಕೋಟೆ ಸಭಾಂಗಣದಲ್ಲಿ ನಡೆದ ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭಾ ಘಟಕದ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು ಇದೇ ಪ್ರಥಮ ಭಾರಿಗೆ ಶಿಲ್ಪಕಲಾ ನಾಡು ಬೇಲೂರು ಪಟ್ಟಣದ ಹೃದಯ ಭಾಗದಲ್ಲಿನ ವೀರಶೈವ ಕಲ್ಯಾಣ ಮಂಟಪ ಅಥಾವ ಡಾ.ಶ್ರೀ ಶಿವಕುಮಾರಸ್ವಾಮೀಜಿ ಕಲ್ಯಾಣ ಮಂಟಪ ತಾಲ್ಲೂಕಿನ ಜನತಗೆ ಚಿರಪರಿಚಿತವಾಗಿದೆ. ಇಂತಹ ಸಮುದಾಯದ ಭವನವನ್ನು ಉನ್ನತೀಕರಿಸಿದ ನಿಟ್ಟಿನಲ್ಲಿ ಸರ್ವ ಭಕ್ತರ ಸಹಕಾರದಿಂದ ವಿಶೇಷವಾಗಿ ಸಿದ್ದಗಂಗಾ ಶ್ರೀ ಪಾದಪೂಜೆ ನಡೆಸಲಾಗುತ್ತದೆ. ಸರ್ವ ಭಕ್ತರು ಪಾದಪೂಜೆಯಲ್ಲಿ ಭಾಗವಹಿಸಬೇಕಿದೆ ಎಂದ ಅವರು ಪಾದಪೂಜೆ ಬಳಿಕ ಶಿವಾನುಭವ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.
ಬೇಲೂರು ತಾಲ್ಲೂಕು ವೀರಶೈವ ಲಿಂಗಾಯಿತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಅಡಗೂರು ಬಸವರಾಜ್ ಮಾತನಾಡಿ ನಾಡಿನ ಮಠ ಪರಂಪರೆಯಲ್ಲಿ ಸಿದ್ಧಗಂಗಾ ಮಠ ನೀಡಿದ ಕೊಡುಗೆ ಅಪಾರವಾಗಿದೆ ಅನ್ನ ವಸತಿ ಶಿಕ್ಷಣ ಸೇರಿದಂತೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ತ್ರಿವಿಧ ದಾಸೋಹವನ್ನು ನೀಡಿದ ಡಾ. ಶಿವಕುಮಾರ ಸ್ವಾಮೀಜಿಯವರ ಕಾರ್ಯವೈಖರಿ ಮತ್ತು ಸೇವಾ ತತ್ಪರತೆ ನಮ್ಮೆಲ್ಲರಿಗೂ ಕೂಡ ಮಾರ್ಗದರ್ಶನವಾಗಿದೆ ಅವರ ಆದರ್ಶ ಚಿಂತನೆ ಆಚಾರ ವಿಚಾರಗಳನ್ನು ಅಳವಡಿಸಿಕೊಂಡ ಸಿದ್ಧಗಂಗಾ ಪರಮ ಪೂಜ್ಯರು ಬೇಲೂರಿಗೆ ಆಗಮಿಸುತ್ತಿರುವುದು ನಮಗೆ ನಿಜಕ್ಕೂ ಸಂತೋಷವಾಗಿದೆ ಸರ್ವ ಭಕ್ತಾದಿಗಳು ಕೂಡ ಜನವರಿ 30ರಂದು ಈ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ವಿನಂತಿ ಮಾಡಿದರು.
ಈ ಸಂದರ್ಭದಲ್ಲಿ ಬೇಲೂರು ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಉಪಾಧ್ಯಕ್ಷರಾದ ಅರುಣಕುಮಾರ್, ಅನ್ನಪೂರ್ಣ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಮದನ್ ಬಳ್ಳೂರು, ಕಾರ್ಯದರ್ಶಿ ಶಿವಕುಮಾರ ಮೊಗಸಾರ, ಹೇಮಾ ವಿರೂಪಾಕ್ಷ, ಖಜಾಂಚಿ ಕೇಬಲ್ ರಾಜಣ್ಣ, ನಿರ್ದೇಶಕರಾದ ಹೆಬ್ಬಾಳು ಹಾಲಪ್ಪ, ಪ್ರಕಾಶ್, ಹರೀಶ್, ಲಕ್ಷ್ಮಿ ನಾಗರಾಜು, ಉಮಾ ಸೋಮಶೇಖರ, ದಾಕ್ಷಯಿಣಿ ಧರ್ಮಪ್ಪ, ಶಶಿಕಲಾ ಸುರೇಶ , ರೋಹಿಣಿ, ಹಾಸನ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಶೈಲಾ ಮೋಹನ್, ಶಿವಕುಮಾರಸ್ಚಾಮಿಜಿ ಟ್ರಸ್ಟ್ ನಿರ್ದೇಶಕ ಪುಟ್ಟಸ್ವಾಮಿ ಇನ್ನೂ ಮುಂತಾದವರು.
ಸಿದ್ದಗಂಗಾ ಮಠದ ಪರಮಪೂಜ್ಯ ಶಿವಕುಮಾರ ಸ್ವಾಮೀಜಿಗಳು ತಮ್ಮ ತಪಸ್ಸಿನ ಫಲದಿಂದ ನಾಡಿನ ಜನಮನದಲ್ಲಿ ಅತ್ಯಂತ ಹೆಚ್ಚು ಭಕ್ತರನ್ನು ಪಡೆದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಅವರ ತರುವಾಯ ಪೀಠವನ್ನು ಅಲಂಕರಿಸಿದ ಶ್ರೀ ಸಿದ್ಧಗಂಗಾ ಪೂಜ್ಯರು ಕೂಡ ಸಮಾಜಕ್ಕೆ ಅಪಾರವಾದಂತಹ ಕೊಡುಗೆಯನ್ನು ನೀಡುತ್ತಿದ್ದಾರೆ ಅವರು ಬೇಲೂರಿಗೆ ಆಗಮಿಸುತ್ತಿರುವುದು ನಿಜಕ್ಕೂ ಸಂತೋಷವಾಗಿದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಹೇಳಿದರು.