ಪರಿಸರಕ್ಕೆ ಮಲೆನಾಡಿನ ಕಾಫಿ ಬೆಳೆಗಾರರ ಕೊಡುಗೆ ಅಪಾರ..!

0
14

ಹಾಸನ ಸಮಾಚಾರ

ಪಾಳುಬಿದ್ದ ಭೂಮಿಯಲ್ಲಿ ಉಳುಮೆ ನಡೆಸಿ ಕಾಫಿ ಜೊತೆಯಲ್ಲಿ ಪರಿಸರಕ್ಕೆ ಪೂರಕವಾದ ಗಿಡಮರಗಳನ್ನು ಬೆಳೆಸುವ ಮೂಲಕ ಮಲೆನಾಡು ಕಾಫಿ ಬೆಳೆಗಾರರು ಪರಿಸರಕ್ಕೆ ಅಪಾರ ಪ್ರಮಾಣದ ಕೊಡುಗೆ ನೀಡಿದ್ದಾರೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಹೇಳಿದರು.

ಬೇಲೂರು ತಾಲ್ಲೂಕಿನ ಹೊಳಲು ಗ್ರಾಮದ ಸಂಘದ ಅವರಣದಲ್ಲಿ ಬಿಕ್ಕೋಡು ಹೋಬಳಿ ಕೆಸಗೋಡು ಭೂಮಿಪುತ್ರ ಬೆಳೆಗಾರರ ಸಂಘದಿಂದ 14 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆ ನಡೆಸಿ ಮಾತನಾಡಿದ ಅವರು, ಇತ್ತೀಚಿನ ದಿನದಲ್ಲಿ ಕಾಫಿ ಬೆಳೆಗಾರರ ಗೋಳು ನಿಜಕ್ಕೂ ಹೇಳತೀರದು, ಅತಿವೃಷ್ಟಿ-ಅನಾವೃಷ್ಟಿಯಿಂದ ಮೊದಲೇ ಬೇಸತ್ತ ಬೆಳೆಗಾರರಿಗೆ ಕಾಡಾನೆ ಹಾವಳಿಯಿಂದ ಬೆಳೆಗಾರರು ವಲಸೆ ಹೋಗುವ ಹೀನ ಪರಿಸ್ಥಿತಿ ಬಂದಿದೆ ಎಂದರು.

ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್ ಮಾತನಾಡಿ, ಅಲೂರು, ಸಕಲೇಶಪುರ, ಮೂಡಿಗೆರೆ, ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಇಲ್ಲದ ಕಾಡಾನೆ ಹಾವಳಿ ಬೇಲೂರು ತಾಲ್ಲೂಕಿನಲ್ಲಿದೆ. ಇದಕ್ಕೆ ಕಾರಣ ಸಂಬಂಧ ಪಟ್ಟ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಜನರು ಪ್ರಶ್ನೆ ಮಾಡಬೇಕಿದೆ ಅಲ್ಲದೆ ಹತ್ತಾರು ಭಾರಿ ಹೋರಾಟ,ಧರಣಿ ನಡೆಸಿದರೂ ಕೂಡ ಆನೆಗಳನ್ನು ಓಡಿಸಲು ಮೀನಾ-ಮೇಷ ಎಣಿಸುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಈ ವಿಷಯವನ್ನು ಅತ್ಯಂತ ಗಂಬೀರವಾಗಿ ಪರಿಗಣಿಸಬೇಕು ಎಂದು ನಾವುಗಳು ಈಗಾಗಲೇ ಅರಣ್ಯಮಂತ್ರಿಗಳಾದ ಈಶ್ವರ್ ಖಂಡ್ರೆರವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಬೇಲೂರು ತಾಲ್ಲೂಕು ಕಾಫಿಬೆಳೆಗಾರರ ಸಂಘದ ಅಧ್ಯಕ್ಷ ಅದ್ದೂರಿ ಚೇತನಕುಮಾರ್ ಮಾತನಾಡಿ, ಕಾಫಿ ಬೆಳೆ ಇತ್ತೀಚಿನದಲ್ಲಿ ದುಬಾರಿ ವೆಚ್ಚದಿಂದಲೇ ಬೆಳೆಯಬೇಕಿದೆ. ಪ್ರಸಕ್ತ ಸಾಲಿನಲ್ಲಿ ಅಲ್ಪಮಟ್ಟಿನ ಬೆಲೆ ಏರಿಕೆಯಿಂದ ಬೆಳೆಗಾರರಿಗೆ ವರಮಾನ ಬಂದಿದೆ. ಆದರೆ ಅಷ್ಟೇ ಪ್ರಮಾಣದಲ್ಲಿ ವೆಚ್ಚ ಮಾಡಬೇಕಿದೆ. ಕಾಡಾನೆ ಸೇರಿದಂತೆ ಹತ್ತಾರು ಬೇಡಿಕೆಗಳನ್ನು ಮುಂದಿಟ್ಟುಕೊAಡು ಮುಂದಿನ ದಿನದಲ್ಲಿ ಹೋರಾಟ ನಡೆಸುವ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಿಂದ ಬೆಳೆಗಾರರು ಸಂಘಟನೆಯಾಗಬೇಕಿದೆ ಎಂದು ಕರೆ ನೀಡಿದರು. ಕೆಸಗೋಡು ಭೂಮಿಪುತ್ರ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಟಿ.ರೇಣುಕಾನಂದ ಮಾತನಾಡಿ, ಸಂಘಟನೆಯಿAದ ಮಾತ್ರ ಸವಲತ್ತು ಮತ್ತು ನ್ಯಾಯ ಪಡೆಯಲು ಸಾದ್ಯ, ಈ ಹಿನ್ನಲೆಯಲ್ಲಿ ಕಳೆದ 12 ವರ್ಷದಿಂದ ಭೂಮಿಪುತ್ರ ಬೆಳೆಗಾರರ ಸಂಘ ರೈತಾಪಿ ವರ್ಗದೊಂದಿಗೆ ಉತ್ತಮ ಕೆಲಸ ಮಾಡುತ್ತಾ ಬಂದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಚಟ್ಟನಹಳ್ಳಿ ವೇದರಾಜ್, ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಭೂಮಿಪುತ್ರ ಮಹಿಳಾ ಅಧ್ಯಕ್ಷೆ ಯಶೋದ ಮಲ್ಲಿಕಾರ್ಜನ್, ಉಪಾಧ್ಯಕ್ಷ ಎಚ್.ಡಿ.ಶಿವಾನಂದ್, ನಫೀಸ್ ಅಹಮದ್, ವೈಶಾಖ್, ಶರತ್ ಪವರ್, ನಿರಂಜನ್,ಮಹಮ್ಮದ್ ವಾಸಿಂ, ರಾಣಿ, ಯೋಗೇಂದ್ರ ಇನ್ನು ಮುಂತಾದವರು ಹಾಜರಿದ್ದರು.