ಆಲೂರು ಚೋಲಗೆರೆ ಟೋಲ್ : ಸ್ಥಳೀಯರಿಂದ ಮತ್ತೆ ಸುಂಕ ವಸೂಲಿ ನಿಲ್ಲಿಸದಿದ್ದರೆ ಹೋರಾಟ..!

0
16

ಹಾಸನ ಸಮಾಚಾರ ವರದಿ

ಆಲೂರು ತಾಲ್ಲೂಕಿನ ಚೋಲಗೆರೆ ಟೋಲ್ ನಲ್ಲಿ ಸ್ಥಳೀಯರಿಂದ ಟೋಲ್ ಸುಂಕ ವಸೂಲಿ ಮಾಡಲಾಗುತ್ತಿದೆ. ಈ ಕೂಡಲೇ ಸ್ಥಳೀಯರಿಂದ ಸುಂಕ ವಸೂಲಿ ನಿಲ್ಲಿಸದಿದ್ದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗಿದೆ ಎಂದು ಸ್ಥಳೀಯ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ ಆಲೂರು ಚೋಲಗೆರೆ ಟೋಲ್ ಸುಂಕ ವಸೂಲಾತಿ ಆರಂಭ ಮಾಡಿದ ವೇಳೆ ಕಾಮಗಾರಿ ಮುಗಿಯದಿದ್ದರು ಟೋಲ್ ಆರಂಭಿಸಲಾಗಿದೆ, ಮತ್ತು ಸ್ಥಳೀಯರಿಂದ ಸುಂಕ ವಸೂಲಿ ಮಾಡಲಾಗುತ್ತಿದೆ ಎಂದು ಸಂಘನೆಗಳು ಟೋಲ್ ಚೋಲಗೆರೆ ಟೋಲ್ ವಿರುದ್ಧ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದ್ದವು, ನಂತರ ಜಿಲ್ಲಾಧಿಕಾರಿ ಹಾಗು ಸಂಸದ ಶ್ರೇಯಸ್ ಪಟೇಲ್ ನೇತೃತ್ವದಲ್ಲಿ ಸಂಘಟನೆಗಳ ಜೊತೆ ಸಭೆ ನಡೆಸಿ 20 ಕೀ.ಮೀ ದೂರದ ಸ್ಥಳೀಯರಿಂದ ಸುಂಕ ವಸೂಲಿ ಮಾಡುವಂತಿಲ್ಲ ಎಂದು ಆದೇಶ ಮಾಡಲಾಗಿತ್ತು. ಇದಕ್ಕೆ ಟೋಲ್ ಆಡಳಿತ ಮಂಡಳಿಯು ಸ್ಥಳೀಯರಿಂದ ವಸೂಲಿ ಮಾಡುವುದಿಲ್ಲ ಎಂದು ಹೇಳಿದ್ದರು. ಅದರಂತೆ ಇತ್ತೀಚಿನವರೆಗೂ ಸ್ಥಳೀಯರಿಂದ ಸುಂಕ ವಸೂಲಿ ಮಾಡುತ್ತಿರಲಿಲ್ಲ. ಆದಾರೆ ಇದೀಗ ಟೋಲ್ ನವರು ಸ್ಥಳೀಯರಿಂದ ಮತ್ತೆ ಸುಂಕ ವಸೂಲಿ ಮಾಡಲಾಗುತ್ತಿದೆ ಎಂದು ಸ್ಥಳೀಯ ಹೋರಾಟಗಾರರು ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಸಮಾಜ ಸೇವಕ ಕಟ್ಟೆಗದ್ದೆ‌ ನಾಗರಾಜು ಆಲೂರು, ಪಾಳ್ಯ‌‌ ಸುತ್ತಮುತ್ತಲ ರೈತರು‌‌ ನಿತ್ಯ ಒಂದಲ್ಲ‌ ಒಂದು ಕಾರಣಕ್ಕೆ ಹಾಸನಕ್ಕೆ ಹೋಗಿ ಬರಬೇಕಾಗುತ್ತದೆ.‌‌ ರೈತರ ಬಳಿ ಸುಂಕ ವಸೂಲಿ‌ ಹೊರೆಯಾಗಲಿದೆ. ಈ‌ ಹಿಂದೆ ಇದರ‌‌‌‌‌ ವಿರುದ್ಧ ‌ಸಂಘಟನೆಗಳು, ಸ್ಥಳೀಯರು ಹೋರಾಟ ಮಾಡಲಾಗಿತ್ತು. ‌ ಇಲ್ಲಿಯವರೆಗೆ ಟೋಲ್ ವಸೂಲಿ ನಿಲ್ಲಿಸಿದ್ದರು ಆದರೆ ಈಗ ಮತ್ತೆ ಸ್ಥಳೀಯರಿಂದ ಇಲ್ಲ ಸಲ್ಲದ ಕಾರಣ ಹೇಳಿ ಹೋರಾಟಕ್ಕೂ ಬೆಲೆ ಕೊಡದೆ ಸುಂಕ ವಸೂಲಿ‌ ಮಾಡುತ್ತಿದ್ದು ಇದನ್ನು ಕೂಡಲೇ ನಿಲ್ಲಿಸಬೇಕು ಇಲ್ಲವಾದರೆ ಮತ್ತೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.