ಹಾಸನದಲ್ಲಿದೆ ವೈದ್ಯ, ಸ್ಟಾಫ್​ ನರ್ಸ್, ಲ್ಯಾಬ್​ ಟೆಕ್ನಿಶಿಯನ್ ಅಲ್ಲಿದೆ​​ ಉದ್ಯೋಗ; ಇಲ್ಲಿದೆ ಹೆಚ್ಚಿನ ವಿವರ.

0
364

ಹಾಸನ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ – ಆಯುಷ್ಮಾನ್​​ ಭಾರತ್​ ಮೂಲ ಸೌಕರ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ನಿರ್ಮಿತವಾದ ನಮ್ಮ ಕ್ಲಿನಿಕ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ವೈದ್ಯರು, ನರ್ಸ್, ಲ್ಯಾಬ್​ ಟೆಕ್ನಿಶಿಯನ್ ಸೇರಿದಂತೆ ಒಟ್ಟು 28 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಹುದ್ದೆ ವಿವರ:
ಒಟ್ಟು 62 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಹೀಗಿದೆ ಹುದ್ದೆ ವಿವರ, ಮೆಡಿಕಲ್​ ಆಫೀಸರ್​ ವಿಭಾಗದಲ್ಲಿ – 7 ಹುದ್ದೆಗಳು, ಸ್ಟಾಫ್​ ನರ್ಸ್​ ವಿಭಾಗದಲ್ಲಿ – 7 ಹುದ್ದೆಗಳು, ಲ್ಯಾಬರೋಟರಿ ಟೆಕ್ನಿಶಿಯನ್​ ವಿಭಾಗದಲ್ಲಿ – 7 ಹುದ್ದೆಗಳು ಹಾಗೂ ಜ್ಯೂನಿಯರ್ ಹೆಲ್ತ್​ ಅಸಿಸ್ಟಂಟ್​ ವಿಭಾಗದಲ್ಲಿ – 7 ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ:
ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಎಂಬಿಬಿಎಸ್​ ಪದವಿ, ಪದವಿ, ಎಎಸ್ಸಿ, ಬಿಎಸ್ಸಿ ನರ್ಸಿಂಗ್​, ಡಿಪ್ಲೊಮಾಮ ಬಿಎಸ್ಸಿ, ಬಿಡಿಎಸ್​, ಡಿಪ್ಲೊಮಾ ಪದವಿಯನ್ನು ಹೊಂದಿರಬೇಕು.

ವಯೋಮಿತಿ:
ಮೆಡಿಕಲ್​ ಆಫೀಸರ್​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 60, ಸ್ಟಾಫ್​ ನರ್ಸ್​​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ ಗರಿಷ್ಠ 45, ಲ್ಯಾಬೊರೇಟರಿ ಟೆಕ್ನಿಶಿಯನ್​/ ಜ್ಯೂನಿಯರ್​ ಹೆಲ್ತ್​ ಅಸಿಸ್ಟೆಂಟ್​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 40 ವರ್ಷ ಮೀರಿರಬಾರದು.

ಆಯ್ಕೆ ಹೇಗೆ:
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ರೋಸ್ಟರ್ ಕಂ ಮೆರಿಟ್​, ದಾಖಲಾತಿ ಪರಿಶೀಲನೆ ಮೇರೆಗೆ ಆಯ್ಕೆ ಮಾಡಲಾಗುವುದು.

ನೇಮಕಾತಿ ನಡೆಯುವ ಸ್ಥಳ:
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನೇಮಕಾತಿ ಪರೀಕ್ಷೆಯನ್ನು ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ಎನ್​ಹೆಚ್​ಎಂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳ ಕಚೇರಿ ಕಟ್ಟಡ, ಹಾಸನಾಂಬ ಒಳಾಂಗಣ ಕ್ರೀಡಾಂಗಣದ ಪಕ್ಕ, ಸಾಲಗಾಮೆ ರಸ್ತೆ, ಹಾಸನ. ಇಲ್ಲಿ ನಡೆಯಲಿದೆ.

ಈ ಹುದ್ದೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಮಾರ್ಚ್​ 15 ಕಡೆಯ ದಿನವಾಗಿದೆ .

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಜಿಲ್ಲಾಡಳಿತ ವೆಬ್​ಸೈಟ್​ hassan.nic.in ಭೇಟಿ ನೀಡಿ.