ಮೊನ್ನೆ-ಮೊನ್ನೆ ತಾನೇ ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ನಡುವೆ ತೀವ್ರ ಮಾತಿನ ಸಮರ ಇಡೀ ರಾಜ್ಯಾದ್ಯಂತ ವ್ಯಾಪಕ ಸುದ್ದಿಯಾದ ಬೆನ್ನಲ್ಲೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಶಿಕ್ಷಕರಿಗೆ ಕಿರುಕುಳು ನೀಡುವ ಜೊತೆಗೆ ಮಹಿಳಾ ಶಿಕ್ಷಕಿಯರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮತ್ತು ಶಿಷ್ಟಾಚಾರ ಉಲ್ಲಂಘನೆ ಕರ್ತವ್ಯಲೋಪ ಮಾಡಿದ್ದಾರೆ ಎಂದು ಸದ್ಯ ರಾಜೇಗೌಡರನ್ನು ಕರ್ತವ್ಯದಿಂದ ಅಮಾನತು ಪಡಿಸಿದ್ದು, ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಉಂಟಾಗುವ ಜೊತೆಗೆ ಕೈಪಾಳ್ಯದ ತಂತ್ರಕ್ಕೆ ಸೆಡ್ಡು ಹೊಡೆದ ಬೇಲೂರು ಶಾಸಕರ ಕಾರ್ಯಕ್ಷಮತೆ ಬಗ್ಗೆ ಕ್ಷೇತ್ರದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಹೌದು!2023 ರ ವಿಧಾನಸಭಾ ಚುನಾವಣೆ ಜಯಬೇರಿಯೊಂದಿಗೆ ಕ್ಷೇತ್ರಕ್ಕೆ ಶಾಸಕರಾಗಿ ಪ್ರವೇಶಿಸಿದ ಹೆಚ್.ಕೆ.ಸುರೇಶ್, ಅಂದಿನಿಂದ ಕ್ಷೇತ್ರದಲ್ಲಿ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಒತ್ತು ನೀಡುತ್ತಾ ಬಂದಿದ್ದಾರೆ. ಆದರೆ ದುರ್ದೈವ ಎಂಬಂತೆ ಇಲ್ಲಿನ ಕಾಂಗ್ರೆಸ್ ಕೆಲವರು ರಾಜ್ಯದಲ್ಲಿ ತಮ್ಮದೆ ಸರ್ಕಾರವಿದೆ ಎಂಬ ಕಾರಣದಿಂದ ವರ್ಗಾವಣೆ ದಂಧೆ ಮೂಲಕ ಭ್ರಷ್ಟ ಅಧಿಕಾರಿಗಳನ್ನು ಬೇಲೂರಿಗೆ ಕೊಡುಗೆ ನೀಡಲು ಮುಂದಾಗಿರುವುದು ಶಾಸಕರಿಗೆ ಸಿಟ್ಟಿಗೆ ಕಾರಣವಾಗಿದೆ. ತನ್ನ ಕ್ಷೇತ್ರದಲ್ಲಿನ ಅಧಿಕಾರಿಗಳು ಶಾಸಕರ ಮಾತಿಗೆ ಗೌರವ ನೀಡುವ ಬದಲು ಕೈ ಮುಖಂಡ ಮಾತಿಗೆ ಮನ್ನಣೆ ನೀಡುತ್ತಾರೆ ಅಲ್ಲದೆ ಅವರ ಅಣಿತಿ ಮೇಲೆ ಕಾರ್ಯಕ್ರಮದ ಶಿಷ್ಟಾಚಾರ ಉಲ್ಲಂಘಿಸುತ್ತಾರೆ ಎಂದು ಬಹುತೇಕ ಭಾಷಣದಲ್ಲಿ ತಮ್ಮ ಅಸಮಾದಾನ ವ್ಯಕ್ತ ಪಡಿಸಿದ್ದಾರೆ. ಇಂತಹದ್ದೇ ಘಟನೆ ಬೇಲೂರಿನ ಕಳೆದ ದಿನದಲ್ಲಿ ನಡೆದಿದ್ದು, ಕ್ರೀಡಾಕೂಟದ ಉದ್ಘಾಟನೆ ಸಂದರ್ಭದಲ್ಲಿ ನಾನು ಬಿಇಒ ಜೊತೆಗೆ ಕುಳಿತುಕೊಳ್ಳುವುದಿಲ್ಲ ಕಾರಣ ಇಲ್ಲಿನ ಬಿಇಒ ರಾಜೇಗೌಡ ಒಬ್ಬ ಭ್ರಷ್ಟ, ಮಹಿಳಾ ಶಿಕ್ಷಕಿಯರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮತ್ತು ಶಿಕ್ಷಕರಿಗೆ ಕಿರುಕುಳ ನೀಡುತ್ತಾರೆ ಎಂದು ಶಾಸಕ ಹೆಚ್.ಕೆ.ಸುರೇಶ್ ಬಹಿರಂಗ ಸಭೆಯಲ್ಲಿ ಖಂಡಿಸಿದ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಕೂಡ ಶಾಸಕರ ವಿರುದ್ದ ತಿರುಗಿ ಬಿದ್ದು ತೀವ್ರ ಮಾತಿನ ಚಕಮುಖಿಯಾಗಿತ್ತು. ಇಡೀ ರಾಜ್ಯಾಧ್ಯಂತ ವ್ಯಾಪಕ ಸುದ್ದಿಯಾದ ಈ ಘಟನೆ ತಾರ್ಕಿಕ ಹಂತಕ್ಕೆ ತಲುಪಿದೆ. ಬಿಇಒ ರಾಜೇಗೌಡರ ಅಮಾನತು ಆದೇಶ ಪತ್ರ ಹೊರಬಿದ್ದಿದ್ದ ಬಳಿಕ ಕೆಲ ಶಿಕ್ಷಕರು ಮತ್ತು ಶಿಕ್ಷಕಿಯರ ನೆಮ್ಮದಿಗೆ ಕಾರಣವಾಗಿದೆ ಎನ್ನಲಾಗಿದೆ.
ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಕೆ.ಸುರೇಶ್ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಮುಂದಾಗಿರುವ ಸಂದರ್ಭದಲ್ಲಿ ಕೈಮುಖಂಡರು ಬೆಂಬಲ ನೀಡಬೇಕು ಆದರೆ ವರ್ಗಾವಣೆ ದಂಧೆಯಲ್ಲಿ ಭ್ರಷ್ಟ ಅಧಿಕಾರಿಗಳನ್ನು ಬೇಲೂರಿಗೆ ಕರೆತರುವುದು ಖಂಡನೀಯ, ಒಬ್ಬ ಶಾಸಕರಿಗೆ ಗೌರವ ನೀಡದ ಅಧಿಕಾರಿಗಳು ಜನರಿಗೆ ಯಾವ ಸೇವೆ ನೀಡುತ್ತಾರೆ ಎಂಬ ಬಗ್ಗೆ ಚಿಂತನೆ ಮಾಡಬೇಕಿದೆ. ಹೆಚ್.ಕೆ.ಸುರೇಶ್ ಅವರ ಕಾರ್ಯಕ್ಷಮತೆ ನಿಜ್ಕಕೂ ಅಗಮ್ಯ, ಈಗಾಲಾದರೂ ಕೈಪಾಳ್ಯದವರು ವರ್ಗಾವಣೆ ದಂಧೆಗೆ ಬ್ರೇಕ್ ಹಾಕವುದು ಸೂಕ್ತವೆಂದು ವ್ಯಂಗ್ಯವಾಡಿದರು.
ಸಿ.ಎಸ್.ಪ್ರಕಾಶ್. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಬೇಲೂರು.