ಅಕ್ರಮ ಪ್ರಶ್ನಿಸಿದಕ್ಕೆ ಗ್ರಾ.ಪಂ ಅಧ್ಯಕ್ಷರ ಮೇಲೆ ಹಲ್ಲೆಗೆ ಯತ್ನ.

0
227

ಬಂಟೇನಹಳ್ಳಿ ಗ್ರಾ.ಪಂ ಆವರಣದಲ್ಲೇ ಹಲ್ಲೆಗೆ ಯತ್ನ : ಜಗಳವನ್ನು ತಿಳಿಗೊಳಿಸಿದ ಪಂಚಾಯಿತಿ ಅಧಿಕಾರಿಗಳು – ಸದಸ್ಯರು.

ಬೇಲೂರು

ಅಕ್ರಮ ಕುರಿತು ಪ್ರಶ್ನೆ ಮಾಡಿದಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ತಾಲ್ಲೂಕಿನ ಬಂಟೆನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ಹೌದು..! ಬೇಲೂರು ತಾಲೂಕಿನ ಬಂಟೆನಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಶಾಂತಲಾ ಸಂಜೀವಿನಿ ಮಹಿಳಾ ಸಂಘದಲ್ಲಿರುವ ಕೃಷಿ ಯಂತ್ರೋಪಕರಣ ನಿರ್ವಹಣೆ ಅವ್ಯವಸ್ಥೆ ಬಗ್ಗೆ ಗ್ರಾ.ಪಂ ಅಧ್ಯಕ್ಷರಾದ ಧನಂಜಯ ಅವರು ಪ್ರಶ್ನೆ ಮಾಡಿದಕ್ಕೆ ಅವರ ಮೇಲೆ ಗ್ರಾಮ ಪಂಚಾಯಿತಿ ಆವರಣದಲ್ಲೆ ಹಲ್ಲೆಗೆ ಮುಂದಾಗಿರುವ ಘಟನೆ ನಡೆದಿದೆ.

ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸಲು ಹಾಗೂ ಬಡತನ ನಿರ್ಮೂಲನೆ ಮಾಡಿ ಮಹಿಳೆಯರಿಗೆ ಸ್ವಾವಲಂಬನೆ ಜೀವನ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಡಿ ಸಂಜೀವಿನಿ ಯೋಜನೆ ಜಾರಿ ಮಾಡಲಾಗಿದೆ. ಆದರೆ ಈ ಯೋಜನೆಯ ಶಾಂತಲ ಸಂಜೀವಿನಿ ಮಹಿಳಾ ಸಂಘದಲ್ಲಿರುವ ಕೃಷಿ ಯಂತ್ರೋಪಕರಣ ನಿರ್ವಹಣೆ ನೋಡಿದರೆ ಇದು ನಿರ್ವಹಣೆ ಮಾಡುವವರ ಅಭಿವೃದ್ಧಿಗಾಗಿ ಇರುವ ಎಂದೆನಿಸುತ್ತದೆ.

ಕಳೆದ ನಾಲ್ಕು ದಿನಗಳ ಹಿಂದೆ ಬಂಟೆನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಮಾನ್ಯ ಸಭೆಯನ್ನು ಆಯೋಜಿಸಲಾಗಿತ್ತು. ಶಾಂತಲಾ ಸಂಜೀವಿನಿ ಮಹಿಳಾ ಸಂಘದವರು ಸಹ ಸಭೆಗೆ ಆಗಮಿಸಿ ಪಂಚಾಯಿತಿ ಅಧ್ಯಕ್ಷರನ್ನು ಸೇರಿದಂತೆ ಅದರ ಅಡಳಿತ ಮಂಡಳಿಯ ಸದಸ್ಯರನ್ನು ಸಂಘದ ವಾರ್ಷಿಕ ಸಭೆ ಆಹ್ವಾನ ನೀಡಲು ಬಂದಿದ್ದಾರೆ, ಆದರೆ ಆಹ್ವಾನ ಪತ್ರಿಕೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಪಂಚಾಯಿತಿ ಅಧಿಕಾರಿಗಳ ಹೆಸರು ನಮೂದಾಗದೆ ಇರುವುದನ್ನು ಕಂಡು ಗ್ರಾ,ಪಂ ಅಧ್ಯಕ್ಷರಾದ ಧನಂಜಯ ಅವರು ಪ್ರಶ್ನೆ ಮಾಡಿದ್ದಾರೆ. ಕೃಷಿ ಯಂತ್ರೋಪಕರಣ ನಿರ್ವಣೆ ಕುರಿತು ಪ್ರಶ್ನೆ ಮಾಡಿದಕ್ಕೆ ಅದನ್ನೇ ಶಾಂತಲಾ ಸಂಜೀವಿನಿ ಸಂಘದ MBK ಸುಧಾ ಗೊತ್ತಿಲ್ಲದ ಹಾಗೆ ವಿಡಿಯೋ ಚಿತ್ರೀಕರಣಗೊಳಿಸಿ ಅವರ ಪತ್ನಿ ಮತ್ತು ಮಗನಿಗೆ ಕಳಿಸಿದ ಪರಿಣಾಮ ಕೆಲ ಹೊತ್ತಿಗೆ ಗ್ರಾ.ಪಂ ಆವರಣಕ್ಕೆ ಬಂದ ಮಹಿಳಾ ಸದಸ್ಯೆ ಪತ್ನಿ ಮಂಜುನಾಥ ಮತ್ತು ಮಗ ನಾಗರಾಜ್ ಅಧ್ಯಕ್ಷರಾದ ಧನಂಜಯ ರವರಿಗೆ ಮನಬಂದಂತೆ ಅವಾಶ್ಚ್ಯ ಶಬ್ದಗಳಿಂದ ನಿಂದನೆಗೆ ಮುಂದಾಗಿದ್ದಾರೆ, ಸಭೆಯಲ್ಲಿದ್ದ ಸದಸ್ಯರು ಸುಮ್ಮನಿರಿಸಿದರು ಸಮಾಧಾನವಾಗದ ಪತ್ನಿ ಮತ್ತು ಮಗ ಅಧ್ಯಕ್ಷ ಧನಂಜಯ ರವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದ್ದು ಸದ್ಯ ಗ್ರಾ.ಪಂ ಅಧಿಕಾರಿಗಳು, ಸ್ಥಳೀಯರು ಹಾಗೂ ಪಂಚಾಯಿತಿ ಸದಸ್ಯರು ಜಗಳವನ್ನು ತಿಳಿಗೊಳಿಸಿದ್ದಾರೆ.

ಈ ಕುರಿತು ಮಾತನಾಡಿದ ಬಂಟೆನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಧನಂಜಯ ಅವರು, ಗ್ರಾ.ಪಂ ಆವರಣದಲ್ಲಿ ಗ್ರಾಮ ಸಭೆ ನಡೆಯುತ್ತಿತ್ತು, ಅದೇ ವೇಳೆ ಶಾಂತಲಾ ಸಂಜೀವಿ ಮಹಿಳಾ ಸಂಘದವರು ಅವರ ಒಂದು ವಾರ್ಷಿಕ ಸಭೆಗೆ ಆಹ್ವಾನ ನೀಡಲು ಬಂದಿದ್ದರು, ನಮ್ಮ ಸಭೆ ನಡೆಯುತ್ತಿದ್ದರಿಂದ ನಂತರ ಮಾತನಾಡುವೆ ಎಂದು ಹೇಳಿದೆ, ನಂತರ ಸಭೆ ಮುಗಿಸಿ ಪಂಚಾಯಿತಿ ಕಚೇರಿಯಲ್ಲಿ ಮಾತನಾಡಲು ಬಂದಾಗ ಆಹ್ವಾನ ಪತ್ರಿಕೆಯಲ್ಲಿ ಗ್ರಾ.ಪಂ ಸಂಬಂಧಪಟ್ಟವರ ಯಾರ ಹೆಸರನ್ನು ಸಹ ಮುದ್ರಿಸದಿರುವುದು ಕಂಡು ಬರುತ್ತದೆ. ಸಂಘದ ಅಧ್ಯಕ್ಷರಾದ ಸುಶೀಲ ಹಾಗೂ ಶಿಲ್ಪ ಸೇರಿದಂತೆ ನಮ್ಮ ಪಂಚಾತಿಯಿ ಅವರು ಸಹ ಇದ್ದರು, ಪ್ರಶ್ನೆ ಮಾಡಿದ್ದನ್ನೇ ವಿಡಿಯೋ ಮಾಡಿಕೊಂಡಿದ್ದಾರೆ. ನಂತರ ಆ ವಿಡಿಯೋ ಸುಧಾ ಅವರ ಪತಿ ಮತ್ತು ಮಗನಿಗೆ ಕಳುಹಿಸಿದ್ದಾರೆ, ಈ ಘಟನೆ ನಡೆದು ಕೆಲವೇ ನಿಮಿಷಗಳಲ್ಲಿ ಪತಿ ಮತ್ತು ಮಗ ಇಬ್ಬರು ಸಹ ನನ್ನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು, ನಮ್ಮ ಪಂಚಾಯಿತಿ ಸದಸ್ಯರು ನಂತರ ಗಲಾಟೆಯನ್ನು ತಿಳಿಸಿಗೊಳಿಸಿದ್ದಾರೆ ಎಂದ ಅವರು, ಮಹಿಳೆಯರಿಗೆ ಸ್ವಾವಲಂಬನೆ ಜೀವನ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಡಿ ಸಂಜೀವಿನಿ ಯೋಜನೆ ಜಾರಿ ಮಾಡಲಾಗಿದೆ. ಆದರೆ ಈ ಯೋಜನೆಯ ಶಾಂತಲ ಸಂಜೀವಿನಿ ಮಹಿಳಾ ಸಂಘದಲ್ಲಿರುವ ಕೃಷಿ ಯಂತ್ರೋಪಕರಣ ನಿರ್ವಹಣೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುವುದು ನಮ್ಮ ಗಮನಕ್ಕೆ ಬಂದಿದೆ, ಹೆಚ್ಚು ಹಣಕ್ಕೆ ಬಾಡಿಗೆ ರೀತಿಯಾಗಿ ಬಳಕೆ ಮಾಡುತ್ತಿದ್ದಾರೆ, ಹಾಗೂ ಅದರ ಬಾಡಿಗೆ ಹಣದ ಬಗ್ಗೆ ಯಾವ ಮಾಹಿತಿ ನಮಗೆ ಇಲ್ಲ. ಶಾಂತಲ ಮಹಿಳಾ ಸಂಜೀವಿನಿ ಸಂಘದಿಂದ ನೀಡಿರುವ ಸರ್ಕಾರಿ ಯೋಜನೆ ದುರ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಸರ್ಕಾರದಿಂದ ಸಂಘಕ್ಕೆ ನೀಡಿರುವ ಟ್ರಾಕ್ಟರ್ ಸೇರಿದಂತೆ ಇನ್ನಿತರ ಕೃಷಿ ಯಂತ್ರೋಪಕರಣಗಳನ್ನು ಅವರ ಮನೆಯ ಮುಂದೆ ನಿಲ್ಲಿಸಿಕೊಳ್ಳಲು ಅನುಮತಿ ಕೊಟ್ಟವರು ಯಾರು, ಇನ್ನಾದರು ಹೆಚ್ಚೆತ್ತುಕೊಂಡು ಶಾಂತಲ ಸಂಜೀವಿನಿ ಮಹಿಳಾ ಸಂಘದಲ್ಲಿರುವ ಕೃಷಿ ಯಂತ್ರೋಪಕರಣ ನಿರ್ವಹಣೆ ದುರ್ಬಳಕೆಯಾಗದಂತೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಿದೆ ಎಂದು ಮನವಿ ಮಾಡಿದರು.

ನಂತರ ಬಂಟೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಮೂರ್ತಿ ಮಾತನಾಡಿ, ಶಾಂತಲಾ ಸಂಜೀವಿನಿ ಸಂಘದ ಆಗುತ್ತಿರು ಕಾರ್ಯವೈಖರಿಯನ್ನೇ ಪ್ರಶ್ನೆ ಮಾಡಿದಕ್ಕೆ ನಮ್ಮ ಅಧ್ಯಕ್ಷರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಮಹಿಳಾ ಸಂಘದ ಸದಸ್ಯೆಯಾದ ಸುಧಾ ರವರ ಪತಿ ಹಾಗೂ ಪುತ್ರ ಸೇರಿ ಗ್ರಾ.ಪಂ ಅಧ್ಯಕ್ಷರಾದ ಧನಂಜಯ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆಗೆ ಮುಂದಾದರು. ಸಾರ್ವಜನಿಕರು ಕೃಷಿ ಯಂತ್ರೋಪಕರಣ ನಿರ್ವಹಣೆ ಕುರಿತು ಮಾಡಿದ ಆರೋಪಗಳನ್ನು ಕುರಿತು ಪ್ರಶ್ನೆ ಮಾಡಿದಕ್ಕೆ ಗೂಂಡಾ ವರ್ತನೆ ತೋರಿರುವುದು ಖಂಡನೀಯ ಬಡವರಿಗೆ ಅನುಕೂಲವಾಗಲೆಂದು ಸರ್ಕಾರದಿಂದ ಯಂತ್ರೋಪಕರಣಗಳನ್ನು ನೀಡಿದರೆ ಅದನ್ನ ಅವರ ಸ್ವಂತಕ್ಕೆ ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇಲ್ಲಿಯವರೆಗೆ ಸಂಘದ ಆಗುಹೋಗುಗಳನ್ನು ಪರಿಶೀಲನೆ ಮಾಡಬೇಕು ಜೊತೆಗೆ ಶಾಂತಲಾ ಸಂಜೀವಿನಿ ಸಂಘಕ್ಕೆ ನೀಡಿರುವ ಟ್ರಾಕ್ಟರ್ ಸೇರಿದಂತೆ ಇನ್ನಿತರ ಯಂತ್ರೋಪಕರಣಗಳನ್ನು ಗ್ರಾ.ಪಂ ಆವರಣದಲ್ಲಿ ನಿಲ್ಲಿಸಿ ಬಂಟೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಜನರಿಗೆ ಅನುಕೂಲ ಮಾಡಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.