ಟುಡೇ ಹಾಸನ ನ್ಯೂಸ್ ವರದಿ, ಬೇಲೂರು.
ವಿಶೇಷ ವರದಿ : ಹೆಬ್ಬಾಳು ಹಾಲಪ್ಪ
ಸರ್ಕಾರ ಬಡವರು,ದೀನರು, ನಿರ್ಗತಿಕರು ಮತ್ತು ಅಂಗವಿಕಲರಿಗೆ ಸಹಾಯವಾಗಲಿ ಎಂದೇ ಇಂದಿರಾ ಕ್ಯಾಂಟೀನ್ನ್ನು ಆರಂಭಿಸಿದೆ. ಆದರೆ ಇಂದಿರಾ ಕ್ಯಾಂಟೀನ್ನಲ್ಲಿ ಶುಚಿ-ರುಚಿ ಇಲ್ಲದ ಊಟ-ತಿಂಡಿ ಮತ್ತು ಶುದ್ದ ಕುಡಿಯುವ ನೀರಿಗೆ ಬರ ಉಂಟಾಗಿದ್ದು, ಸಂಬಂಧ ಪಟ್ಟವರು ಶೀಘ್ರವೇ ಈ ಬಗ್ಗೆ ಗಮನ ನೀಡಬೇಕು ಇಲ್ಲವಾದರೆ ಹೋರಾಟ ಮೂಲಕವೇ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹೌದು..! ಪ್ರವಾಸಿತಾಣ ಬೇಲೂರು ಪಟ್ಟಣದ ಹೃದಯ ಭಾಗದಲ್ಲಿನ ಇಂದಿರಾ ಕ್ಯಾಂಟೀನ್ ನಿಜಕ್ಕೂ ನೂರಾರು ಬಡವರ, ನಿರ್ಗಕರಿಗೆ ಅನ್ನ ನೀಡುವ ಕೇಂದ್ರದಲ್ಲಿ ಸದ್ಯ ಹೇಳುವರು-ಕೇಳುವರು ಇಲ್ಲದೆ ಬೇಕಾಬಿಟ್ಟೆ ಇಂದಿರಾ ಕ್ಯಾಂಟೀನ್ ನಡೆಸುತ್ತಿದ್ದಾರೆ. ಕ್ಯಾಂಟೀನ್ಗೆ ನಿತ್ಯ ಆಹಾರ ಪದಾರ್ಥಗಳನ್ನು ಮತ್ತು ತರಕಾರಿಗಳು ಸೇರಿದಂತೆ ನಿರ್ವಹಣೆ ಮಾಡುವ ಗುತ್ತಿಗೆದಾರನ ಅಸಡ್ಡೆಯಿಂದ ಇತ್ತೀಚಿನ ದಿನದಲ್ಲಿ ಸರ್ಕಾರದ ಮೆನು ಪ್ರಕಾರ ಆಹಾರವನ್ನು ತಯಾರಿಸುತ್ತಿಲ್ಲ, ತಮಗೆ ಇಷ್ಟಬಂದ ರೀತಿಯಲ್ಲಿ ಆಹಾರವನ್ನು ಮಾಡುತ್ತಾರೆ. ಅಡಿಗೆಮನೆಯಲ್ಲಿ ಸ್ವಚ್ಛತೆ ಬಗ್ಗೆ ಕ್ರಮವಹಿಸಿಲ್ಲ, ಹಾಗೇಯೇ ಹಸಿ ಮೆಣಸಿನಕಾಯಿ ಮತ್ತು ಕುಂಬಳಕಾಯಿ ಬಿಟ್ಟರೆ ತರಕಾರಿಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಲ್ಲ, ಬೆಳಿಗ್ಗೆ ನೀಡುವ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಮೆನು ರೀತಿಯಲ್ಲಿ ಸಿದ್ದಪಡಿಸುವಲ್ಲಿ ವಿಫಲವಾಗಿದ್ದಾರೆ. ಕೇಳಿದರೆ ಇಲ್ಲ-ಸಲ್ಲದ ಸಬೂಬು ಹೇಳುತ್ತಾರೆ. ಕೆಲವರು ಉಡಾಪೆಯಿಂದ ಕೂಡ ವರ್ತಿಸುತ್ತಾರೆ. ಜನಪ್ರತಿನಿಧಿಗಳು ಮತ್ತು ಸರ್ಕಾರದ ಮಟ್ಟದ ಅಧಿಕಾರಿಗಳು ಬರುತ್ತಾರೆ ಎಂದರೆ ಮಾತ್ರ ಶುಚಿತ್ವಕ್ಕೆ ಹಾಗೂ ಶುಚಿ ರುಚಿ ಊಟ ತಿಂಡಿಗೆ ಮನ್ನಣೆ ನೀಡುತ್ತಾರೆ. ಕನಿಷ್ಠ ಶುದ್ದ ಕುಡಿಯುವ ನೀರು ಇಲ್ಲದೆ ಕ್ಯಾಂಟೀನ್ ನಲ್ಲಿನ ಬಕೇಟ್ ನಲ್ಲಿ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಈ ಬಗ್ಗೆ ಯಾರು ಕೂಡ ಗಮನ ಹರಿಸುತ್ತಿಲ್ಲ, ಬೇಲೂರಿನ ಶಾಸಕರು ಹಾಗೂ ಪುರಸಭಾ ಅಧ್ಯಕ್ಷರು ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಹಿಂದೆ ನಮ್ಮದೆ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯನವರು ಬಡವರಿಗೆ ಉಪಯೋಗವಾಗಿ ಎಂದೇ ಸ್ಥಾಪಿಸಿದ ಇಂದಿರಾ ಕ್ಯಾಂಟೀನ್ ಯೋಜನೆ ದೇಶದಲ್ಲಿಯೇ ಮೆಚ್ಚುಗೆ ಪಡೆದ ಮಹತ್ವಪೂರ್ಣ ಯೋಜನೆ ಬೇಲೂರಿನಲ್ಲಿ ಸ್ಥಾಪನೆ ಮಾಡಿದ್ದಾರೆ. ಅಲ್ಲಿ ಅಸ್ವಚ್ಚತೆ ಮತ್ತು ಶುಚಿತ್ವ ಇಲ್ಲದ ಬಗ್ಗೆ ಜನರಿಂದ ದೂರ ಬಂದ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಲಾಗುತ್ತದೆ ಎಂದರು.
–ಎ.ಆರ್.ಅಶೋಕ್. ಅಧ್ಯಕ್ಷರು ಪುರಸಭಾ ಬೇಲೂರು.
ಇಂದಿರಾ ಕ್ಯಾಂಟೀನ್ ಹೇಗೆ ನಿರ್ವಹಣೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಸರ್ಕಾರ ಹಾಗೂ ಸಂಬAಧ ಪಟ್ಟ ಇಲಾಖೆ ಅಧಿಕಾರಿಗಳು ಜಾಣ ಮೌನಕ್ಕೆ ಜಾರಿದ ಕಾರಣದಿಂದಲೇ ಇಲ್ಲಿ ಅವ್ಯವಸ್ಥೆಗೆಯಾಗಿದೆ. ಸರ್ಕಾರ ನೀಡಿದ ಮೆನು ಪ್ರಕಾರದಲ್ಲಿ ಅಡಿಗೆ ತಯಾರಿಸುವುದು, ಜನರಿಗೆ ಶುದ್ದ ಕುಡಿಯುವ ನೀರಿನ ಪೂರೈಕೆ ಮತ್ತು ಶುಚಿತ್ವವನ್ನು ಕಾಪಾಡಬೇಕಿದೆ. ಆದರೆ ಇಂದಿರಾ ಕ್ಯಾಂಟೀನ ನಲ್ಲಿ ಅಂತಹ ಸ್ವಚ್ಛತೆ ಕಾಣಡುತ್ತಿಲ್ಲ, ಬಹುತೇಕ ಮಂದಿ ಊಟ-ತಿಂಡಿಯ ಬಗ್ಗೆ ಅಸಡ್ಡೆ ತೋರಿದ ಕಾರಣದಿಂದ ಶೀಘ್ರವೇ ಪುರಸಭಾ ಅಧ್ಯಕ್ಷ ಸ್ಥಳ ಪರಿಶೀಲನೆ ನಡೆಸಬೇಕಿದೆ ಎಂದು ತಿಳಿಸಿದರು.
-ಎಂ.ಜೆ.ನಿಂಗರಾಜ್. ಜಿಲ್ಲಾಧ್ಯಕ್ಷರು ಮಾನವ ಹಕ್ಕುಗಳ ಹೋರಾಟ ಸಮಿತಿ